Breaking News

ಅನಂತನಾಗ್ ಎನ್‍ಕೌಂಟರ್ ನಾಲ್ವರು ಉಗ್ರರು ಬಲಿ...!

ಅನಂತನಾಗ್ ಎನ್‍ಕೌಂಟರ್ ನಾಲ್ವರು ಉಗ್ರರು ಬಲಿ

ಜಮ್ಮು - ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತ ಆರಂಭವಾದ ನಂತರದಲ್ಲಿ ಭಯೋತ್ಪಾದಕರ ಹುಟ್ಟಡಗಿಸಲು ಕೇಂದ್ರ ಸರಕಾರ ಹೊರಟಿದೆ. ಕಣಿವೆ ರಾಜ್ಯದಲ್ಲಿ ಶುಕ್ರವಾರವಾದ ಇಂದು ಸಹ ಸೇನೆಯ ಭಯೋತ್ಪಾದಕರ ಮಟ್ಟ ಹಾಕುವ ಕಾರ್ಯ ನಡೆಯಿತು. ಬೆಳಿಗ್ಗೆ ಖಿರಾಮ್ ಶ್ರೀ ಗುಪಾರದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ನಾಲ್ವರು ಉಗ್ರರು ಹತರಾಗಿದ್ದಾರೆ.

ಇದಕ್ಕೂ ಮೊದಲು ನಡೆದ ಗುಂಡಿನ ಚಕಮಕಿಯಲ್ಲಿ ಜಮ್ಮು ಕಶ್ಮೀರ ವಿಶೇಷ ಪೊಲೀಸ್ ಕಾರ್ಯಾಚರಣೆಯ ತಂಡದ ಓರ್ವ ಸಿಬ್ಬಂದಿ ಹುತಾತ್ಮರಾಗಿದ್ದು, ಓರ್ವ ಮಹಿಳೆ ಕೂಡಾ ಸಾವಿಗೀಡಾಗಿದ್ದಾರೆ.
ಇದನ್ನು ಓದಿರಿ : ಬಿಜೆಪಿ ಉಗ್ರಗಾಮಿ ಸಂಘಟನೆ : ಮಮತಾ

ಉಗ್ರರು ಇಸ್ಲಾಮಿಕ್ ಸ್ಟೇಟ್ ಜಮ್ಮು ಕಾಶ್ಮೀರ ಸಂಘಟನೆಯ ಸದಸ್ಯರಾಗಿದ್ದು, ಅದರ ಮುಖಂಡ ಅಹಮದ್ ಸೋಫಿ ಅಲಿಯಾಸ್ ಧನಿಷ್ ಎನ್ ಕೌಂಟರ್ ನಲ್ಲಿ ಬಲಿಯಾಗಿದ್ದಾನೆ. ಖಿರಾಮ್ ಶ್ರೀ ಗುಪಾರದಲ್ಲಿ  ಎನ್ ಕೌಂಟರ್ ಮುಂದುವರೆದಿದ್ದು ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಆದರೆ ದುರದ್ರಷ್ಟವಶಾತ್ ಜಮ್ಮು ಕಶ್ಮೀರ ವಿಶೇಷ ಪೊಲೀಸ್ ಪಡೆಯ ಓರ್ವ ಸಿಬ್ಬಂದಿಯನ್ನು ನಾವು ಕಳೆದುಕೊಂಡಿದ್ದೇವೆ ಎಂದು ಜಮ್ಮು ಕಾಶ್ಮೀರದ ಡಿಜಿಪಿ ಶೇಷ್ ಪೌಲ್ ವೈದ್ ಟ್ವೀಟ್ ಮಾಡಿದ್ದಾರೆ.


ಉಗ್ರರ ಹತ್ಯೆಯಲ್ಲಿ ಹೆಚ್ಚಳ.. 
ಬಿಜಿಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಉಗ್ರರ ಹತ್ಯೆಯ ಸಂಖ್ಯೆ ಹೆಚ್ಚಾಗಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ. 2012 ರಲ್ಲಿ ಕೇವಲ 72 ಉಗರನ್ನು ಹತ್ಯೆ ಮಾಡಲಾಗಿದ್ದರೆ, 2013 ರಲ್ಲಿ 67, ಮತ್ತು 2014 ರಲ್ಲಿ ನಾವು ಅಧಿಕಾರಕ್ಕೆ ಬಂದ  ನಂತರ 110 ಉಗ್ರರನ್ನು ಕೊಳ್ಳಲಾಗಿದೆ ಎಂದರು.

2015 ರಲ್ಲಿ 108, 2016 ರಲ್ಲಿ 150, 2017 ರಲ್ಲಿ 217 ಮತ್ತು ಮೇ ವರೆಗೆ  75 ಉಗ್ರರನ್ನು ಸದೆಬಡಿದು ನಮ್ಮ ಸೈನ್ಯ ಬಯೋತ್ಪಾದನೆಯ  ವಿರುದ್ಧ ಸಮಾರ  ಸಾರಿದೆ ಎಂದರು.


                                                       YOU MAY ALSO LIKE

No comments