ಜಮ್ಮು- ಕಾಶ್ಮೀರದ ಸರಕಾರ ಪತನ ...! ಅಧಿಕಾರದಿಂದ ಕೆಳಗಿಳಿದ ಬಿಜೆಪಿ ..! - News Desk

Tuesday, June 19, 2018

ಜಮ್ಮು- ಕಾಶ್ಮೀರದ ಸರಕಾರ ಪತನ ...! ಅಧಿಕಾರದಿಂದ ಕೆಳಗಿಳಿದ ಬಿಜೆಪಿ ..!



ಜಮ್ಮು- ಕಾಶ್ಮೀರದಲ್ಲಿ ಕಳೆದ ಮೂರೂ ವರ್ಷಗಳಿಂದ ಪಿಡಿಪಿ ಪಕ್ಷದ ಜೊತೆಗೆ ಭಾರತೀಯ ಜನತಾ ಪಕ್ಷ ಸರಕಾರವನ್ನು ನಡೆಸಿಕೊಂಡು ಬಂದಿತ್ತು. ಆದರೆ ಈಗ ಮೂರು ವರ್ಷಗಳಿಂದ ಮೈತ್ರಿ ಸರಕಾರ ನಡೆಸಿಕೊಂಡು ಬರುತ್ತಿದ್ದ ಭಾರತೀಯ ಜನತಾ ಪಕ್ಷ ತನ್ನ ಮೈತ್ರಿಯನ್ನು ಮುರಿದುಕೊಂದಿದೆ. ಈ ಬಗ್ಗೆ ಅಧಿಕೃತ ಹೇಳಿಕೆಯನ್ನು ನೀಡಿರುವ  ಭಾರತೀಯ ಜನತಾ ಪಕ್ಷ ತಾವು ಪಿಡಿಪಿ ಪಕ್ಷದೊಂದಿಗೆ ಮುಂದುವರಿಯುವುದಿಲ್ಲ ಎಂದಿದೆ.


ಭಾರತೀಯ ಜನತಾ ಪಕ್ಷದ ಅಸ್ಥಿತ್ವವೇ ಇಲ್ಲದ ಕಣಿವೆ ರಾಜ್ಯ ಜಮ್ಮು- ಕಾಶ್ಮೀರದಲ್ಲಿಕಳೆದ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ರಾಷ್ಟೀಯ ಅಧ್ಯಕ್ಷ ಅಮಿತ್ ಶಾ ಅವರ ನೇತೃತ್ವದಲ್ಲಿ 25 ಸ್ಥಾನಗಳನ್ನು ಗಳಿಸುವ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸಿತ್ತು. ನಂತರ 28 ಸ್ಥಾನ ಗಳಿಸಿದ್ದ ಪಿಡಿಪಿಯೊಂದಿಗೆ ಕೈಜೋಡಿಸಿ ಸರಕಾರವನ್ನು ರಚಿಸಿತ್ತು. ತಮ್ಮ ಮೈತ್ರಿಸರಕಾರದ ಮುಖ್ಯಮಂತ್ರಿಯಾಗಿ ಮೆಹಬೂಬ ಮುಪ್ತಿ ಆಯ್ಕೆಯಾಗಿದ್ದರು. ಆದರೆ ಮೆಹಬೂಬರವರ ಸರಕಾರ ಕೇಂದ್ರದ ಭಯೋತ್ಪಾದನಾ ನಿಗ್ರಹ ಕ್ರಮಕ್ಕೆ ಸರಿಯಾದ ಸಾತ್ ನೀಡುತ್ತಿರಲಿಲ್ಲ. ಉಗ್ರ ನಿಗ್ರಹಕ್ಕೆ ಸರಿಯಾದ ಸಹಕಾರ ನೀಡದ ಸರಕಾರದ ವಿರುದ್ಧ ಬಿಜೆಪಿ ತಿರುಗಿ ಬಿದ್ದಿತ್ತು. ಈ ಹಿನ್ನೆಲೆಯಲ್ಲಿ ಇಂದು ಮೈತ್ರಿಸರಕಾರಕ್ಕೆ ರಾಜೀನಾಮೆ ನೀಡಿ ಹೊರಬಂದಿದೆ.



ಪ್ರತ್ಯೇಕತಾವಾದಿಗಳು ಮತ್ತು ಭಯೋತ್ಪಾದಕರ ವಿರುದ್ಧ ಪಿಡಿಪಿಯ ಮೃದುದೋರಣೆ...

ಅಧಿಕಾರ ವಹಿಸಿಕೊಂಡಾಗಿನಿಂದಲೂ ಪ್ರತ್ಯೇಕತಾವಾದಿಗಳು ಮತ್ತು ಭಯೋತ್ಪಾದಕರ ವಿರುದ್ಧ ಪಿಡಿಪಿ ಪಕ್ಷ ಮೃದುದೋರಣೆಯನ್ನು  ಅನುಸರಿಸುತ್ತಾ ಬಂದಿತ್ತು. ಕಲ್ಲು ಎಸೆಯುವವರ ವಿರುದ್ದದ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವ ಕಠಿಣ ನಿಲುವನ್ನು ತೆಗೆದುಕೊಳ್ಳದ ಕಾರಣವಾಗಿ ಭಾರತೀಯ ಜನತಾ ಪಕ್ಷ ಸರಕಾರದಿಂದ ಹೊರಬಂದಿದೆ. ಜಮ್ಮು- ಕಾಶ್ಮೀರದಲ್ಲಿ  ಭದ್ರತೆ ಹಾಗು ಸುರಕ್ಷತೆಯ ವೈಫಲ್ಯ ಮತ್ತು ಮೈತ್ರಿ ಧರ್ಮದ ಪಾಲನೆಯನ್ನು ಮಾಡದ ಕಾರಣಕ್ಕಾಗಿ ಬಿಜೆಪಿ ಹೊರಬಂದಿದೆ.

ಭಾರತೀಯ ಜನತಾ ಪಕ್ಷ ಕಣಿವೆ ರಾಜ್ಯದ  ಭದ್ರತೆಯ ಹಾಗೂ ಶಾಂತಿಯ ಸಲುವಾಗಿ  ಈ ಕ್ರಮಕ್ಕೆ ಮುಂದಾಗಿದೆ. ಈ ಹಿಂದೆ 'ಆಪರೇಷನ್ ಆಲ್ ಔಟ್' ಕೈಗೊಂಡಾಗ ಈ ರಾಜ್ಯದಲ್ಲಿ  ಸ್ವಲ್ಪ ಮಟ್ಟಿನ ಶಾಂತಿ ಕಂಡುಬಂದಿತ್ತು. ಆದರೆ ರಂಜಾನ್ ಕಾರಣಕ್ಕಾಗಿ ಆಪರೇಷನ್ ತಡೆಹಿಡಿದಿದ್ದರಿಂದ  ಮತ್ತೆ ಕಲ್ಲು ತೂರಾಟ ಸೇರಿದಂತೆ ಉಗ್ರರ ಚಟುವಟಿಕೆ ಪ್ರಾರಂಭವಾಗಿದೆ. ಜಮ್ಮು- ಕಾಶ್ಮೀರದಲ್ಲಿ ಸಮ್ಮಿಶ್ರ ಸರಕಾರ ಪತನಗೊಂಡು ರಾಜ್ಯಪಾಲರ ಅಧಿಕಾರ ಆರಂಭಗೊಂಡರೆ ಕೇಂದ್ರದ ಸಂಪೂರ್ಣ ಅಧಿಕಾರ ಚಲಾವಣೆಯಾಗುವುದು ಇದರಿಂದ ಉಗ್ರರ ದಮನವು ತುಂಬಾ ಸುಲಭವಾಗುವುದು ಎಂಬುದು ಬಿಜೆಪಿಯ ಲೆಕ್ಕಾಚಾರ.



ಅದಲ್ಲದೆ ಸದ್ಯದಲ್ಲಿಯೇ ಲೋಕಸಭಾ ಚುನಾವಣೆಯು ಇರುವುದರಿಂದ ರಾಜ್ಯದಲ್ಲಿ ರಾಜಕೀಯ ಅಲ್ಲೋಲಕಲ್ಲೋಲ ಆರಂಭವಾಗಿದೆ. ಬಹುತೇಕ ಜಮ್ಮು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ಉಂಟಾಗುವ  ಸಾಧ್ಯತೆ ನಿಶ್ಚಲವಾಗಿದೆ. ಈ ಮೂಲಕ ಉಗ್ರರ ನೆಪವೊಡ್ಡಿ ಭಾರತೀಯ ಜನತಾ ಪಕ್ಷ ತನ್ನ ನೇತೃತ್ವದ ಕೇಂದ್ರ ಸರಕಾರದ ಮೂಲಕ ಜಮ್ಮು ಮತ್ತು ಕಾಶ್ಮೀರದಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿ ಉಗ್ರರನ್ನು ನಿಗ್ರಹಿಸಿ ಸ್ವಂತ ಶಕ್ತಿಯಲ್ಲಿ  ಬರುವ ಲೆಕ್ಕಾಚಾರವನ್ನು ಹಾಕುತ್ತಿದೆ. 
ಇವನ್ನೂ ಓದಿರಿ : ಮೋದಿಗೆ ಚಿರಋಣಿ ಎಂದ ಕುಮಾರ ಸ್ವಾಮಿ..!

                     ರಾಜ್ಯಗಳಿಗೆ ಬಂಪರ್ ಆಫರ್ ನೀಡಿದ ಮೋದಿ ! 





YOU MAY ALSO LIKE

No comments:

Post a Comment