ಆಪರೇಷನ್ ಆಲ್ ಔಟ್ : ಗಡಿಯಲ್ಲಿ ಭಯೋತ್ಪಾದಕರ ಹತ್ಯೆ - News Desk

Friday, June 29, 2018

ಆಪರೇಷನ್ ಆಲ್ ಔಟ್ : ಗಡಿಯಲ್ಲಿ ಭಯೋತ್ಪಾದಕರ ಹತ್ಯೆ

Indian Army

ಇಂದು ನಡೆದ ಆಪರೇಷನ್ ಆಲ್ ಓಟ್ ಕಾರ್ಯಾಚರಣೆಗೆ ಮೂವರು ಉಗ್ರರು ಬಲಿಯಾಗಿದ್ದಾರೆ. ಜಮ್ಮು ಕಾಶ್ಮೀರದ ಪುಲ್ವಾಮಾ ದ ಚಟಪೋರ್ ಪ್ರದೇಶದಲ್ಲಿ ಇಂದು ಸೈನಿಕರು ಕಾರ್ಯಾಚರಣೆಯನ್ನು ನಡೆಸಿದರು. ಭಯೋತ್ಪಾದಕರ ಜಾಡು ಹಿಡಿದು ಹೋರಾಟ ತಂಡ ಪುಲ್ವಾಮಾದ ಅರಣ್ಯದಲ್ಲಿ ಒಬ್ಬ ಉಗ್ರನನ್ನು ಹೊಡೆದುರುಳಿಸಿದರು.

ಇದಾದ ಕೆಲವೇ ಗಂಟೆಯಲ್ಲಿ  ಮತ್ತಿಬ್ಬರು ಉಗ್ರರನ್ನು ಏನ್ ಕೌಂಟರ್ ಮಾಡಲಾಯಿತು. ಇದಕ್ಕೂ ಮೊದಲು ಉಗ್ರರು ಮತ್ತು ಸೇನೆಯ ನಡುವೆ ಗುಂಡಿನ ಚಕಮಕಿ ನಡೆದಿತ್ತು.

ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಏನ್ ಕೌಂಟರ್ ನಲ್ಲಿ ಮೂವರು ಉಗ್ರರು ಹತರಾಗಿದ್ದಾರೆ, ಮತ್ತು ಕಾರ್ಯಾಚರಣೆ ಮುಂದುವರೆದಿದೆ ಎಂದು ಮಾಜಿ ಡಿಜಿಪಿ ಎಸ್ಪಿ ವಾಯಿದ್ ಟ್ವೀಟ್ ಮಾಡಿದ್ದಾರೆ.                                                       YOU MAY ALSO LIKE

No comments:

Post a Comment