Breaking News

ಅಂತೂ ಇಂತೂ ಸಿಕ್ತು ನಲಪಾಡ್‌ಗೆ ಬೇಲ್


ಐದು ಸಾರಿ ಯತ್ನಿಸಿದರೂ ಜಾಮೀನು ಪಡೆಯುವಲ್ಲಿ ವಿಫಲವಾಗಿದ್ದ ವಿದ್ವತ್ ಹಲ್ಲೆ ಪ್ರಕರಣದ ಆರೋಪಿ ನಲಪಾಡ್‌ಗೆ ಇಂದು ಹೈ ಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ.
ಶಾಸಕ ಎಂಬ ಕಾರಣಕ್ಕೆ ಈ ಪ್ರಕರಣದಲ್ಲಿ ಪ್ರಭಾವ ಬೀರಿದ್ದಾರೆಂದು ಹೇಳಲಾಗದು ಎಂದು ಅಭಿಪ್ರಾಯ ಪಟ್ಟಿರುವ ಕೋರ್ಟ್, ಕಡೆಗೂ ಜಾಮೀನು ನೀಡಿದೆ. ಆ ಮೂಲಕ ಶಾಂತಿನಗರ ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್‌ಗೆ 116 ದಿನಗಳ ಜೈಲುವಾಸ ಅಂತ್ಯವಾಗಿದೆ.
ಜು.13ರಂದು ನಡೆದ ಎರಡು ಗಂಟೆಗಳ ಕಾಲ ವಾದ ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಅರ್ಜಿ ವಿಚಾರಣೆ ಪೂರ್ಣಗೊಳಿಸಿ, 2 ಲಕ್ಷ ರೂ. ಬಾಂಡ್, ಇಬ್ಬರು ಶೂರಿಟಿ, ಸಾಕ್ಷ್ಯ ನಾಶ ಮಾಡಬಾರದು, ಇಂಥ ಅಪರಾಧಗಳು ಪುನರಾವರ್ತಿತವಾಗಬಾರದು, ಎಂಬ ಷರತ್ತು ವಿಧಿಸಿದ ಕೋರ್ಟ್ ಜಾಮೀನು ನೀಡಿದೆ.
ಹಿಟ್ಲರ್ ವರ್ತನೆಯಿಂದ ಪ್ರಕರಣಕ್ಕೆ ಮಹತ್ವ
ವಾದ ಮಂಡಿಸಿದ ಸಿಸಿಬಿ ತನಿಖಾಧಿಕಾರಿಗಳ ಪರ ವಿಶೇಷ ಅಭಿಯೋಜಕ ಎಂ.ಎಸ್. ಶ್ಯಾಮಸುಂದರ್, ದೇಶದಲ್ಲಿ ಸಾಕಷ್ಟು ಕೊಲೆ ಯತ್ನ ಪ್ರಕರಣಗಳು ನಡೆದಿರಬಹುದು, ಆದರೆ, ಸಾರ್ವಜನಿಕರ ಮುಂದೆ ಅಧಿಕಾರದ ದರ್ಪವನ್ನು ಪ್ರದರ್ಶಿಸಲು ಹಿಟ್ಲರ್‌ನಂತೆ ವರ್ತಿಸಿದ್ದರಿಂದಲೇ ನಲಪಾಡ್ ಪ್ರಕರಣ ಮಹತ್ವ ಪಡೆದುಕೊಂಡಿದೆ ಹೊರತು, ಆತ ಶಾಸರೊಬ್ಬರ ಪುತ್ರ ಎಂಬ ಕಾರಣಕ್ಕೆ ಅಲ್ಲ ಎಂದು ವಾದಿಸಿದ್ದರು. 
ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ನ್ಯಾ.ಜಾನ್ ಮೈಕಲ್ ಕುನ್ಹಾ ಅವರು ಕೊಲೆ ಯತ್ನದಂತಹ ಅನೇಕ ಪ್ರಕರಣಗಳು ಕೋರ್ಟ್ ಮುಂದೆ ನಿತ್ಯ ಬರುತ್ತಿವೆ. ನಲಪಾಡ್ ಪ್ರಕರಣ ಹೇಗೆ ಭಿನ್ನ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ದೇಶದಲ್ಲಿ ಲಕ್ಷಾಂತರ ಅತ್ಯಾಚಾರ ಪ್ರಕರಣ ನಡೆದಿವೆ. ಆದರೆ, ನಿರ್ಭಯಾ, ಅಮರ್‌ಮಣಿ ತ್ರಿಪಾಠಿ ಮತ್ತು ನೀರು ಯಾದವ್ ಪ್ರಕರಣಗಳು ಎಲ್ಲರ ಗಮನ ಸೆಳೆದವು. ನಿರ್ಭಯಾ ಪ್ರಕರಣದ ನಂತರವೇ ಅತ್ಯಾಚಾರ ಕುರಿತಾದ ಕಾನೂನು ತಿದ್ದುಪಡಿಯಾಯಿತು. ಅದೇ ರೀತಿ ಸಾರ್ವಜನಿಕರ ಮುಂದೆ ಅಧಿಕಾರದ ದರ್ಪ ಪ್ರದರ್ಶಿಸಿ ಹಿಟ್ಲರ್‌ನಂತೆ ವರ್ತಿಸಿದ್ದರಿಂದಲೇ ನಲಪಾಡ್ ಪ್ರಕರಣ ಮಹತ್ವ ಪಡೆದುಕೊಂಡಿತು ಹೊರತು, ಆತ ಶಾಸರೊಬ್ಬರ ಪುತ್ರ ಎಂಬ ಕಾರಣಕ್ಕೆ ಅಲ್ಲ ಎಂದು ಉತ್ತರಿಸಿದ್ದರು.
ಪ್ರಭಾವ ಬೀರಿರುವುದಕ್ಕೆ ಸಾಕ್ಷ್ಯವಿದೆಯೇ?: 
ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಕೊಲೆ ಯತ್ನ ಪ್ರಕರಣ ನಡೆಯುತ್ತಿಲೇ ಇರುತ್ತವೆ. ನಿತ್ಯ ನಮ್ಮ ಕೋರ್ಟ್‌ಗೆ ಇಂತಹ ಹಲವು ಪ್ರಕರಣಗಳು ವಿಚಾರಣೆಗೆ ಬರುತ್ತವೆ. ನಲಪಾಡ್ ಪ್ರಕರಣ ಸಹ ಅದೇ ಮಾದರಿಯದ್ದು. ಹೀಗಿರುವಾಗ ಕೋರ್ಟ್ ಒಳಗೆ ಹಾಗೂ ಹೊರಗೆ ನಲಪಾಡ್ ಪ್ರಕರಣವನ್ನೇಕೆ ವಿಭಿನ್ನವಾಗಿ ಪರಿಗಣಿಸಲಾಗುತ್ತಿದೆ? ಆತ ಶಾಸಕರ ಪುತ್ರ ಎಂಬ ಕಾರಣಕ್ಕಾಗಿಯೇ? ಆರೋಪಿಯ ವ್ಯಕ್ತಿತ್ವವು ಪ್ರಕರಣದಲ್ಲಿನ ಅಂಶಗಳನ್ನು ಬದಲಿಸುತ್ತದೆಯೇ? ಆರೋಪಿಯ ತಂದೆ ಶಾಸಕರು ಎಂಬ ಮಾತ್ರಕ್ಕೆ ಪ್ರಕರಣದ ಮೇಲೆ ಪ್ರಭಾವ ಬೀರುತ್ತಾರೆ ಎಂದು ಭಾವಿಸಲಾಗದು.  ಪ್ರಭಾವ ಬೀರಿರುವುದಕ್ಕೆ ಸಾಕ್ಷ್ಯಾಧಾರವಿದೆಯೇ? ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದ್ದರು.
ಇದನ್ನೂ ಓದಿರಿ : ಇಂದಿನಿಂದ ರಷ್ಯಾದಲ್ಲಿ ರಂಗೇರಲಿರುವ ವಿಶ್ವಕಪ್ ಫುಟ್ಬಾಲ್ ಕ್ರೀಡಾಕೂಟ! YOU MAY ALSO LIKENo comments