Breaking News

ಮುಂಬೈ ಏರ್‌ಪೋರ್ಟ್‌ನಿಂದ ಮತ್ತೊಂದು ದಾಖಲೆ

ಮುಂಬೈ ಏರ್‌ಪೋರ್ಟ್‌
ಮುಂಬೈ ಏರ್‌ಪೋರ್ಟ್‌

ನಮ್ಮ ದೇಶದ ಹೆಮ್ಮೆಯ ಮುಂಬೈ ಏರ್ಪೋರ್ಟ್ ಹಿಂದೆ ಇದ್ದ ತನ್ನೆಲ್ಲ ದಾಖಲೆಯನ್ನು ಮುರಿದು, ಒಂದೇ ದಿನದಲ್ಲಿ 1000 ಕ್ಕೂ ಅಧಿಕ ವಿಮಾನಗಳ ಹಾರಾಟ, ಆಗಮನ ಪ್ರಕ್ರಿಯೆಯನ್ನು ನಿರ್ವಹಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮಂಗಳವಾರ 24 ಗಂಟೆಗಳಲ್ಲಿ 1,003 ವಿಮಾನಗಳ ಹಾರಾಟ, ಆಗಮನ ಪ್ರಕ್ರಿಯೆಯನ್ನು ಮುಂಬೈ ವಿಮಾನ ನಿಲ್ದಾಣ ನಿರ್ವಹಿಸಿತು ಎಂದು ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವಕ್ತಾರ ತಿಳಿಸಿದ್ದಾರೆ.

ಈ ಹಿಂದೆ ಒಂದೇ ದಿನ 988 ವಿಮಾನಗಳನ್ನು ನಿರ್ವಹಿಸಿದ್ದ ಹೆಗ್ಗಳಿಕೆ ಈ ವಿಮಾನ ನಿಲ್ದಾಣಕ್ಕಿತ್ತು. ಪ್ರಾಥಮಿಕ ರನ್‌ವೇನಲ್ಲಿ ಗಂಟೆಗೆ 48 ಮತ್ತು ಎರಡನೇ ರನ್‌ವೇನಲ್ಲಿ 35 ವಿಮಾನಗಳನ್ನು ನಿರ್ವಹಿಸಬಹುದಾಗಿದೆ.
YOU MAY ALSO LIKE
No comments