Breaking News

ಇರಾನ್ ಅನ್ನು ಮಣಿಸಿ ಕಬ್ಬಡ್ಡಿ ಮಾಸ್ಟರ್ಸ್ – 2018 ಗೌರವವನ್ನು ಗೆದ್ದ ಭಾರತ..


ಕಬ್ಬಡ್ಡಿ ಮಾಸ್ಟರ್ಸ್ ದುಬೈ ಫೈನಲ್ಸ್ – 2018 ಈ ವಿಶ್ವ ಪಂದ್ಯಾವಳಿಯಲ್ಲಿ ಭಾರತ ಕಬ್ಬಡ್ಡಿ ತಂಡ ಇರಾನ್ ಅನ್ನು ಫೈನಲ್ಸ್ ನಲ್ಲಿ 44 – 26 ಅಂತರದಿಂದ ಮಣಿಸಿ ಪ್ರಶಸ್ತಿಯನ್ನು ತನ್ನದಾಗಿಸಿ ಭಾರತದ ಕೀರ್ತಿಪತಾಕೆಯನ್ನು ಹಾರಿಸಿದೆ. ಭಾರತ ತಂಡದ ಪರ ಅಜಯ್ ಠಾಕೂರ್ ಅವರು 9 ರೈಡ್ ಪಾಯಿಂಟ್ ಗಳನ್ನು ಗಳಿಸುವ ಮೂಲಕ ಭಾರತ ತಂಡಕ್ಕೆ ನೆರವಾದರು. ಈ ಪಂದ್ಯಾಟದ ಆರಂಭದಿಂದ ಮಧ್ಯ ಅಂತರದವರೆಗೆ ಭಾರತ ಇರಾನ್ ಮೇಲೆ ತನ್ನ ಪ್ರಾಬಲ್ಯವನ್ನು ಸಾಧಿಸಿದ್ದು ಬಳಿಕ ಇರಾನ್ ಸ್ವಲ್ಪ ಮಟ್ಟಿನ ಸ್ಪರ್ಧೆ ನೀಡಿತ್ತು. ಆ ಸಂದರ್ಭ ಭಾರತೀಯ ಆಟಗಾರರಾದ ರಿಶಾಂಕ್, ಠಾಕೂರ್, ಗೊಯತ್ ಅವರು ಇರಾನ್ ತಂಡವನ್ನು ಸಮರ್ಥವಾಗಿ ಎದುರಿಸಿ ಭಾರತ ಮುನ್ನಡೆ ಕಾಯ್ದುಕೊಳ್ಳುವಂತೆ ನೋಡಿಕೊಂಡರು.

ಇದಕ್ಕೂ ಮೊದಲು ನಡೆದ ಸೆಮಿಫೈನಲ್ ಪಂದ್ಯಾಟದಲ್ಲಿ ಭಾರತ ತಂಡವು ದಕ್ಷಿಣ ಕೊರಿಯಾ ತಂಡವನ್ನು 36 – 20 ಅಂತರದಿಂದ ಸೋಲಿಸಿ ಫೈನಲ್ಸ್ ಗೆ ಲಗ್ಗೆ ಇಟ್ಟಿತ್ತು. ಈ ಸೆಮಿಫೈನಲ್ಸ್ ಪಂದ್ಯದಲ್ಲಿ ಭಾರತದ ಪರ ನಾಯಕ ಅಜಯ್ ಠಾಕೂರ್ ಹಾಗೂ ಗಿರೀಶ್ ಎರ್ನಾಕ್ ಅವರು ಉತ್ತಮ ಪ್ರದರ್ಶನ ನೀಡಿ ಭಾರತ ತಂಡದ ಗೆಲುವಿಗೆ ಕಾರಣರಾದರು.
                                                         YOU MAY ALSO LIKE

No comments