6 ಬೋಗಿ ಮೆಟ್ರೊ ರೈಲಿಗೆ ಹಸಿರು ನಿಶಾನೆ ಇಂದು - News Desk

Friday, June 22, 2018

6 ಬೋಗಿ ಮೆಟ್ರೊ ರೈಲಿಗೆ ಹಸಿರು ನಿಶಾನೆ ಇಂದು

Bangalore Metro Train

ಬೆಂಗಳೂರು: ಬೈಯ್ಯಪ್ಪನಹಳ್ಳಿ- ಮೈಸೂರು ರೋಡ್‌ ಮಾರ್ಗದಲ್ಲಿ ಆರು ಬೋಗಿಗಳ ಮೆಟ್ರೊ ರೈಲು ಶುಕ್ರವಾರದಿಂದ ಸಂಚಾರ ಆರಂಭಿಸಲಿದೆ.
ನೇರಳೆ ಮಾರ್ಗದ ಬೈಯ್ಯಪ್ಪನಹಳ್ಳಿ ನಿಲ್ದಾಣದಲ್ಲಿ ಸಂಜೆ 5.30ಕ್ಕೆ ಹೊಸ ರೈಲಿಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಹಸಿರು ನಿಶಾನೆ ತೋರಲಿದ್ದು, ಈ ರೈಲು ಮೆಜೆಸ್ಟಿಕ್‌ ನಿಲ್ದಾಣದವರೆಗೆ ಸಂಚರಿಸಲಿದೆ. ಇದೇ ರೈಲಿನಲ್ಲಿ ವಿಧಾನಸೌಧದವರೆಗೆ ಕುಮಾರಸ್ವಾಮಿ ಪ್ರಯಾಣಿಸಲಿದ್ದಾರೆ.
ಈ ರೈಲಿನ ಮೊದಲ ಬೋಗಿಯನ್ನು ಮಹಿಳೆಯರಿಗೆ ಮೀಸಲಿಡಲಾಗುವುದು. ಪ್ರಯಾಣಿಕರ ದಟ್ಟಣೆ ನೋಡಿಕೊಂಡು ಹೊಸ ರೈಲು ಓಡಾಡಲಿದೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.
ಮೆಟ್ರೊ ರೈಲು ಪ್ರಯಾಣಿಕರ ಪೈಕಿ ಶೇ 40ರಷ್ಟು ಮಹಿಳೆಯರಿರುವುದನ್ನು ಸಮೀಕ್ಷೆಯಿಂದ ಖಚಿತಪಡಿಸಿಕೊಂಡಿರುವ ನಿಗಮ, ಈ ಕಾರಣಕ್ಕೆ ಆರು ಬೋಗಿಯ ರೈಲಿನ ಮೊದಲ ಬೋಗಿಯನ್ನು ಮಹಿಳೆಯರಿಗೆ ಮೀಸಲಿಟ್ಟಿದೆ.
YOU MAY ALSO LIKE



No comments:

Post a Comment