Breaking News

ಹೊಸಬರ ಹಾರರ್ ಚಿತ್ರ 'ಸದ್ದು' ರಿಲೀಸ್

ಹಾರರ್ ಚಿತ್ರ 'ಸದ್ದು'

ಹೊಸಬರೇ ಸೇರಿ ನಿರ್ಮಿಸಿದ ಹಾರರ್ ಹಾಗೂ ಕುತೂಹಲ ಮೂಡಿಸುತ್ತಿರುವ ಚಿತ್ರ 'ಸದ್ದು'.  ಅರುಣ್ ಅವರ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬಂದಿದ್ದು, ಎನ್. ವಿರೇಶ್ ಅವರ  ಛಾಯಾಗ್ರಹಣದಲ್ಲಿ ಲಭಿಸಿದೆ.  ಅರಣ್ಯದಲ್ಲಿ ನಡೆಯುವ ಕಥಾನಕ ಇದಾಗಿದ್ದು, ಪರಿಸರ ಜಾಗ್ರತಿಯ ಜೊತೆಗೆ ಸ್ವಲ್ಪ ಹಾರರ್ ಹಾಗೂ ಆ್ಯಕ್ಷನ್, ಥ್ರಿಲ್ಲರ್ ಲವ್ ಸ್ಟೋರಿಯಾಗಿದೆ.  

ನಿಖಿತಾ ಇಲ್ಲಿ ನಾಯಕಿಯಾಗಿ ಅಭಿನಯಿಸಿದ್ದು, ವೈಲ್ಡ್ ಲೈಫ್ ಫೋಟೋಗ್ರಾಫರ್ ಆಗಿ ಕಾಣಿಸಿಕೊಂಡಿದ್ದಾರಂತೆ. ಕಾಡಿನಲ್ಲಿ ಫೋಟೋ ತೆಗೆಯುವ ವೇಳೆ ಏನೆಲ್ಲಾ ತೊಂದರೆ ಎದುರಿಸಬೇಕಾಗುತ್ತದೆ ಎಂಬ ಅಂಶದೊಂದಿಗೆ ಅವರ ಪಾತ್ರ ಸಾಗುತ್ತದೆಯಂತೆ. ಇನ್ನು ಸಾಮಾಜಿಕ ಕಳಕಳಿಯನ್ನು ಹೊಂದಿದ ಈ ಚಿತ್ರದಲ್ಲಿ ನಿಖಿತಾ ಸ್ವಾಮಿ, ಭರತ್, ಭಾಗ್ಯ, ಅರ್ಶಿತಾ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. No comments