Breaking News

ಭೀಮ್ ಆಫ್ ಬಳಕೆದಾರರಿಗೆ ಸಿಗಲಿದೆ 51 ರೂ. ಕ್ಯಾಶ್ಬ್ಯಾಕ್

ಇದೇ  ಏಪ್ರಿಲ್ 14 ರಂದು ಭೀಮ್ ಆಪನ್ನು ಅಪಡೇಟ್ ಮಾಡಿ, ಒಂದು ವರ್ಷದ ಸಂಭ್ರಮಕ್ಕಾಗಿ ಆಪರನ್ನು ಘೋಷಿಸಿದೆ. ಏನೆಲ್ಲಾ ವಿಶೇಷ ಪ್ರಯೋಜನಗಳನ್ನು ಗ್ರಾಹಕರು ಪಡೆಯಬಹುದು ಎಂಬುದನ್ನು ತಿಳಿಸಿಕೊಡುವ ಒಂದು ಸಣ್ಣ ಪ್ರಯತ್ನ ಇದಾಗಿದೆ.

Bhim App


ಈ ಭೀಮ್ ಅಯಪ್ ನ್ನು  ಸುಲಭವಾಗಿ  ಗೂಗಲ್ ಪ್ಲೆ ಸ್ಟೋರ್ ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಇದು ಕೇವಲ ಎರಡು ಎಂ. ಬಿ. ಗಾತ್ರವನ್ನು ಹೊಂದಿದ್ದು , ಗ್ರಾಹಕರ ಅಚ್ಚುಮೆಚ್ಚಿನ ಹಾಗೂ ಬದ್ರತೆಗೆ ಹೆಸರಾದ ಅಯಪ್ ಆಗಿದೆ. ಇದನ್ನು ಬ್ಯಾಂಕ ಖಾತೆಯೊಂದಿಗೆ ಸುಲಭವಾಗಿ ಲಿಂಕ್ ಮಾಡಿಕೊಂಡು ಬಳಕೆ ಮಾಡಬಹುದಾಗಿದೆ. ಲಿಂಕ್ ಮಾಡಲು ಖಾತೆಯೊಂದಿಗೆ  ಮೊಬೈಲ್ ನಂ ಜೋಡಣೆಯಾಗಿದ್ದರೆ ಸಾಕಾಗುತ್ತದೆ.

ಭೀಮ್ ಆಫ್ ಬಳಕೆದಾರರು ತಿಂಗಳಿಗೆ 750 ರೂಪಾಯಿಯ ವರೆಗೆ ಕ್ಯಾಶ್ಬ್ಯಾಕ್ ಪಡೆಯುವ ಅವಕಾಶ ಕಲ್ಪಿಸಲಾಗಿದೆ.
ಅಂತೆಯೇ ವ್ಯಾಪಾರಿಗಳಿಗೂ ಒಂದು ತಿಂಗಳಿಗೆ ಸುಮಾರು 1000 ರೂ. ಹಣ ವಾಪಸಾತಿಯನ್ನು ಪಡೆಯಬಹುದಾಗಿದೆ. ಹೊಸದಾಗಿ ಆಫ್ ಡೌನ್ಲೋಡ್ ಮಾಡಿಕೊಂಡು ಖಾತೆ ತೆರೆಯುವವರಿಗೆ ಪ್ರಥಮ ವಹಿವಾಟಿನಲ್ಲಿಯೇ 51 ರೂಪಾಯಿಯ ಕ್ಯಾಶ್ಬ್ಯಾಕ್ ನೀಡಲಿದೆ.

Bhim Cash Backಹೊಸ ಬಳಕೆದಾರರು 1 ರೂ  ವಹಿವಾಟು ನಡೆಸಿದರೂ 51 ರೂಪಾಯಿಯ ಕ್ಯಾಶ್ಬ್ಯಾಕ್ ಸಿಗಲಿದೆ. ಇಲ್ಲಿ ಎಷ್ಟು ಮೊತ್ತದ ವಹಿವಾಟು ನಡೆಸಿದ್ದೀರಿ ಎನ್ನುವುದು ಮಹತ್ವ ಪಡೆಯುವುದಿಲ್ಲ. ಇದು ಗ್ರಾಹಕರನ್ನು ಈ ರೀತಿಯಾಗಿ ಸೆಳೆದು ಕ್ಯಾಶ್ ಲೆಸ್ ವಹಿವಾಟಿಗೆ ಉತ್ತೇಜಿಸುವ ಒಂದು ವಿಧಾನವಾಗಿದೆ.No comments