ಹಸಿರು ಮೇವು ಬೆಳೆಗಳ ರಾಣಿ ಲ್ಯೂಸರ್ನ್ - News Desk

Wednesday, April 4, 2018

ಹಸಿರು ಮೇವು ಬೆಳೆಗಳ ರಾಣಿ ಲ್ಯೂಸರ್ನ್


Cow image


ಲ್ಯೂಸರ್ನ್ ಇದು ಪಶು ಆಹಾರ ಬೆಳೆಗಳಲ್ಲಿ ಅತ್ಯುತ್ತಮವಾದ ಬೆಳೆ. ಏಕೆಂದರೆ ಇದು ನೀರಾವರಿ ಮತ್ತು ಒಣ ಬೇಸಾಯದಲ್ಲಿಯೂ ಬೆಳೆಯಬಹುದಾಗಿದ್ದು, ಅಧಿಕ ಇಳುವರಿಯ ಜೊತೆಗೆ ಹೆಚ್ಚಿನ ಪ್ರೊಟೀನ್ ಅಂಶವನ್ನು ಹೊಂದಿದೆ. 

ಡೈರಿ ನಡೆಸುವಂತಹ ರೈತರು ಇದನ್ನು ಉತ್ತಮವಾಗಿ ಬೆಳೆಸಿಕೊಂಡು, ದನಗಳಿಗೆ ಮೇಯಿಸುವ ಮೂಲಕ ಹೆಚ್ಚಿನ ಪ್ರೊಟೀನ್ ಪೂರೈಕೆಯನ್ನು ಮಾಡುತ್ತಾರೆ. 

ಲ್ಯೂಸರ್ನ್ ಒಂದು ದ್ವಿದಳ ಜಾತಿಗೆ ಸೇರಿದ ಗಿಡವಾಗಿದ್ದು , ಇದು ರೈಜೋಬಿಯಂ ಬ್ಯಾಕ್ಟೀರಿಯಾದ ಮೂಲಕ ಭೂಮಿಯಲ್ಲಿ ಸಾರಜನಕ ಸ್ಥಿರೀಕರಣಕ್ಕೆ ಸಹಾಯ ಮಾಡುತ್ತದೆ. 

ಲ್ಯೂಸರ್ನ್ ಬೆಳೆಯನ್ನು ರೈತರು ಬೆಳೆಯಲು ಕೆಲವು ಕಾರಣಗಳು :-

1. ಗುಣಮಟ್ಟದ ಆಹಾರ :-
ಇದರಲ್ಲಿ ಪ್ರೊಟೀನ್ ನ ಅಂಶವು ಹೇರಳವಾಗಿದ್ದು, ಡೈರಿ ದನಗಳನ್ನು ಸಾಕುವವರಿಗೆ ಉತ್ತಮ ಗುಣಮಟ್ಟದ ಆಹಾರವಾಗಿದೆ. ಇದರಲ್ಲಿ ಸುಮಾರು 15 ರಿಂದ 22  ಶೇ. ಪ್ರೊಟೀನ್ ಅಂಶ ತುಂಬಿಕೊಂಡಿದೆ. ಸಾಮಾನ್ಯವಾಗಿ ಡೈರಿ ದನಗಳಿಗೆ ಅವಶ್ಯವಿರುವ ಸುಮಾರು 16 ರಿಂದ 18 ಶೇ. ಪ್ರೊಟೀನ್ ನ ಅವಶ್ಯಕತೆಯನ್ನು ಪೂರೈಸುವಲ್ಲಿ ಇದು ಸಹಾಯಕ. 

ಲ್ಯೂಸರ್ನ್
ಲ್ಯೂಸರ್ನ್ 

ಈ ಬೆಲೆಯಲ್ಲಿ ಕೇವಲ ಪ್ರೊಟೀನ್ ಅಲ್ಲದೆ ಜೀವಸತ್ವಗಳು ಮತ್ತು ಖನಿಜಗಳು ಸಹ ತುಂಬಿಕೊಂಡಿವೆ. ಹೂ ಬಿಡುವ ಸಮಯದಲ್ಲಿ ಕಟಾವು ಮಡಿದ ಮೇವಿನಲ್ಲಿ ಅಧಿಕ ಪ್ರಮಾಣದ ನಾರಿನ ಅಂಶವೂ ಸಹ ಕಂಡು ಬರುತ್ತದೆ. ಇದನ್ನು ಹುಲ್ಲು ಅಥವಾ ಸೈಲೇಜ್ ರೂಪದಲ್ಲಿಯೂ ಸಂರಕ್ಷಿಸಿ ಇಡಬಹುದಾಗಿದ್ದು ಎಲ್ಲ ರೀತಿಯಿಂದಲೂ ಇದೊಂದು ಒಳ್ಳೆಯ ಆಹಾರ ಬೆಳೆಯಾಗಿದೆ. 

2. ಹೆಚ್ಚಿನ ಇಳುವರಿ :-
ಎಲ್ಲಾ ವಾತಾವರಣದಲ್ಲಿಯೂ ಉತ್ತಮವಾಗಿ   ಈ ಬೆಲೆಯೂ ಮಳೆಗಾಲದಲ್ಲಿ ಎರಡರಿಂದ ಮೂರೂ ಬರಿ ಕಟಾವಿಗೆ  ಬರುತ್ತದೆ. ನೀರಾವರಿ ಜಮೀನಿನಲ್ಲಿ  ಬೆಳೆಯ  ಅವಲಂಬಿಸಿ ಸುಮಾರು ೪ ರಿಂದ ೬ ಕಾಟವನ್ನು ಪಡೆಯಬಹುದಾಗಿದೆ. ನೀರಾವರಿಯಲ್ಲಿ ಈ ಬೆಳೆಯನ್ನು ಬೆಳೆಯುವುದರಿಂದ ವರ್ಷವಿಡೀ ಇಳುವರಿಯನ್ನು ಪಡೆದುಕೊಳ್ಳಬಹುದು. ಇದರಿಂದಾಗಿ ಡೈರಿ ದನಗಳನ್ನು ಸಾಕುವವರಿಗೆ ಉತ್ತಮವಾದ ಬೆಂಬಲ ನೀಡುವ ಒಂದು ಬೆಳೆ  ಎನ್ನಬಹುದಾಗಿದೆ.

3. ಅಗ್ಗದ ಪ್ರೊಟೀನ್ ನ ಮೂಲ :-
ಲ್ಯೂಸರ್ನ್ ಹುಲ್ಲುನ್ನು ಇತರ ಹುಲ್ಲಿನ ಜೊತೆಗೆ ಮಿಶ್ರ ಮಾಡಿ ನೀಡುವುದರಿಂದ ಅವಶ್ಯಕ ಪ್ರೊಟೀನ್ ದೊರೆಯುತ್ತದೆ. ಡೈರಿ ದನಗಳಿಗೆ ಅತೀ ಕಡಿಮೆ ದರದಲ್ಲಿ ಈ ರೀತಿಯಾಗಿ ಪ್ರೊಟೀನ್ ಪೂರೈಸಬಹುದು.

4. ದೀರ್ಘಾವಧಿಯ ಬಾಳಿಕೆ :-
ಈ ಗಿಡವನ್ನು ಒಮ್ಮೆ ನಾಟಿ ಮಾಡಿ, ಬೆಳೆಯನ್ನು ಬೆಳೆದರೆ ಪದೇ ಪದೇ ನಾಟಿ ಮಾಡುವ ಅವಶ್ಯಕತೆ ಇರುವುದಿಲ್ಲ. ಒಮ್ಮೆ ನಾಟಿಮಾಡಿದರೆ ಹಲವಾರು ವರ್ಷಗಳು ಉಳಿಯುತ್ತದೆ. ಡೈರಿ ಫಾರ್ಮನ್ನು ಸವೆಸುವ ರೈತರು ತಮ್ಮ ಜಮೀನಿನಲ್ಲಿ ಒಂದು ಸಾಲು ಲ್ಯೂಸರ್ನ್ ಮತ್ತು ಮತ್ತೊಂದು ಸಾಲು ಯಾವುದಾದರು ಏಕದಳ ಜಾತಿಗೆ ಸೇರಿದ ಮೇವಿನ ಬೆಳೆಯನ್ನು  ಹಾಕಿಕೊಂಡಲ್ಲಿ ಮದ್ಯದಲ್ಲಿ ಉಳುಮೆ ಮಾಡಿ ಗೊಬ್ಬರ ನೀರನ್ನು ನೀಡಬಹುದಾಗಿರುತ್ತದೆ. ಒಮ್ಮೆ ನಟಿ ಮಾಡಿದರೆ ಈ ಲ್ಯೂಸರ್ನ್ ಬೆಳೆಯನ್ನು ಪದೇ ಪದೇ ನಾಟಿ ಮಾಡುವ ಅವಶ್ಯಕತೆ ಬಾರದಿರುವುದು ರೈತರು ಈ ಬೆಳೆಯ ಬಗ್ಗೆ ಒಲವು ತೋರಲು ಒಂದು ಕಾರಣವಾಗಿದೆ.

5. ಮಣ್ಣಿನ ಫಲವತ್ತತೆ ಸುಧಾರಣೆ :-
ಏಕದಳ ಬೆಳೆಗಳನ್ನು ಬೆಳೆದ ನಂತರ  ಅಥವಾ ಮಿಶ್ರಬೆಳೆಯಾಗಿಯೂ ಬೆಳೆಯುವುದರಿಂದ ಮಣ್ಣಿನಲ್ಲಿ ಕೊರತೆ ಉಂಟಾದ ಸಾರಜನಕವನ್ನು ಈ ಬೆಲೆಯೂ ಪೂರೈಸುತ್ತದೆ. ಈ ಗಿಡವು ವಾತಾವರಣದಲ್ಲಿರುವ ಸಾರಜನಕವನ್ನು ರೈಜೋಬಿಯಂ ಬ್ಯಾಕ್ಟೀರಿಯಾದ ಸಹಾಯದಿಂದ ಮಣ್ಣಿಗೆ ಸ್ಥಿರೀಕರಿಸುತ್ತದೆ. ಈ ಬೆಳೆಯನ್ನು ಬೆಳೆಯುವುದರಿಂದ ಮಣ್ಣಿನ ಪಲವತ್ತತೆಯು  ಸುಧಾರಿಸುತ್ತದೆ.

ಲ್ಯೂಸರ್ನ್


ಪ್ರಮುಖ ಅಂಶಗಳು :-
* ಪೌಷ್ಠಿಕವಾದ ಮೇವು.
* ಹಸಿರು ಮೇವುಗಳ ರಾಣಿ.
* ಧೀರ್ಘಕಾಲಿಕ ಮೇವಿನ ಬೆಳೆ.
* ಒಣ ಹವಾಮಾನದಲ್ಲಿ ಬೆಳೆದ ಲ್ಯೂಸರ್ನ್ ನಲ್ಲಿ 15-20ಶೇ. ಪ್ರೊಟೀನ್ ಇರುತ್ತದೆ.
* ಲ್ಯೂಸರ್ನ್ ಮಣ್ಣಿಗೆ ಸಾರಜನಕವನ್ನು ಸೇರಿಸಿ ಪಲವತ್ತಾಗಿಸುತ್ತದೆ.
* ಆನಂದ-2, ಶೀರ್ಷಾ -9, IGFRIS-244, Co-1ಪ್ರಮುಖ ತಳಿಗಳಾಗಿವೆ.
* ಶಿಪಾರಸು ಮಾಡಲಾದ  ಬಿತ್ತನೆ ಬೀಜದ ಪ್ರಮಾಣ 20ಕೆ.ಜಿ./ಹೇ.
* ಮೊದಲ ಸುಗ್ಗಿಯ ಕಾಲ 75 - 80 ದಿನಗಳು.
* ಅತಿಯಾಗಿ ಮೇವನ್ನು ತಿನ್ನಿಸುವುದರಿಂದ ಅನಾರೋಗ್ಯ ಉಂಟಾಗುತ್ತದೆ.

ಒಟ್ಟಿನಲ್ಲಿ ಇದೊಂದು ಉತ್ತಮ ದ್ವಿದಳ ಜಾತಿಯ ಮೇವು ಆಗಿದೆ. ಇದನ್ನು ಹೆಚ್ಚಿನ ಪ್ರಮಾಣದಲ್ಲಿ ರಾಸುಗಳಿಗೆ ನೀಡದೆ ( 2-3 ಕೆ.ಜಿ. /ದಿನಕ್ಕೆ ) ಮುಂಜಾಗ್ರತೆ ವಹಿಸುವುದು ಅವಶ್ಯಕವಾಗಿದೆ. ಇದರ ಅತಿಯಾದ ಸೇವನೆಯಿಂದ ಅಜೀರ್ಣ ಉಂಟಾಗಿ ಹೊಟ್ಟೆಯುಬ್ಬರ ಉಂಟಾಗುತ್ತದೆ. ಸರಿಯಾದ ಪ್ರಮಾಣದಲ್ಲಿ ನೀಡುವ ಮೂಲಕ ಕಡಿಮೆ ವೆಚ್ಚದಲ್ಲಿ ಅವಶ್ಯಕವಾದ ಪ್ರೊಟೀನನ್ನು ನೈಸರ್ಗಿಕವಾಗಿ ಪೂರೈಸಬಹುದು.
ಇವುಗಳನ್ನೂ ಓದಿರಿ : * ಹೈನುರಾಸುಗಳಿಗೆ ಮೇವಿನ ಕೊರತೆಯೇ .... ಇಲ್ಲಿದೆ ಕೆಲವು ಮೇವಿನ ಬೆಳೆಗಳ ಮಾಹಿತಿ. 

                        * ಜಾನುವಾರುಗಳಲ್ಲಿ ಕಾಲು ಬಾಯಿ ರೋಗ.  


ಲ್ಯೂಸರ್ನ್


ಈ ಲೇಖನ ಇಷ್ಟವಾದರೆ ಲೈಕ್ ಮಾಡಿ... ಶೇರ್ ಮಾಡಿ... ಇನ್ನು ಹೆಚ್ಚಿನ ಮಾಹಿತಿಗಳು ಬೇಕಾಗಿದ್ದಾರೆ ಕಾಮೆಂಟ್ ಮಾಡಿ...
ನಮ್ಮ ಫೇಸ್ಬುಕ್ ಪೇಜನ್ನು ಲೈಕ್ ಮಾಡಿ ಇಂತಹ ಸುದ್ದಿಯನ್ನು ಮೊದಲು ಪಡೆಯಿರಿ.  
Like

loading...

No comments:

Post a Comment