Breaking News

ಸೂರ್ಯನಮಸ್ಕಾರದ ಪ್ರಯೋಜನಗಳು

ಸೂರ್ಯನಮಸ್ಕಾರ ಪ್ರಪಂಚಕ್ಕೆ ಭಾರತ ನೀಡಿದ ಮಹಾನ್ ಕೊಡುಗೆಗಳಲ್ಲಿ ಒಂದು. ಇತ್ತೀಚಿಗೆ  ಬಹಳ ಪ್ರಸಿದ್ದಿಯನ್ನು ಪಡೆಯುತ್ತಿರುವುದು ಭಾರತೀಯರಾದ ನಾವೆಲ್ಲರೂ ಹೆಮ್ಮೆ ಪಡುವ ವಿಚಾರವಾಗಿದೆ. ಇಡೀ ಭೂಮಂಡಲಕ್ಕೇ ಬೆಳಕನ್ನು ನೀಡುವ ಸೂರ್ಯದೇವನಿಗೆ ನಮಸ್ಕಾರವನ್ನು ಮಾಡುವ ನೆಪದಲ್ಲಿ ಇಡೀ ದೇಹಕ್ಕೆ ವ್ಯಾಯಾಮವನ್ನು ಒದಗಿಸುವುದೇ ಈ ಸೂರ್ಯನಮಸ್ಕಾರ .  ಋಷಿ ಮುನಿಗಳು ಅಪಾರ ಜ್ಞಾನ ಬಂಡಾರವನ್ನು ಹೊಂದಿದು, ಈ ಮಹಾನ್ ಕೊಡುಗೆಯನ್ನು ನಮಗಾಗಿ ನೀಡಿ ಹೋಗಿದ್ದಾರೆ. ಇದರ ಸದುಪಯೋಗ ಪಡಿಸಿಕೊಂಡು ನಾವೆಲ್ಲರೂ ಆರೋಗ್ಯವಂತರಾಗಿ ಬಾಳೋಣ.

ಸೂರ್ಯನಮಸ್ಕಾರ


ಈ ಸೂರ್ಯನಮಸ್ಕಾರವನ್ನು ಪ್ರತಿದಿನ ಸೂರ್ಯೋದಯದ ನಮಯದಲ್ಲಿ ಮಾಡುವುದರಿಂದ ಅನೇಕ ಆರೋಗ್ಯ ಲಾಭಗಳನ್ನು ಪಡೆಯಬಹುದಾಗಿದೆ. ಈ ಸೂರ್ಯ ನಮಸ್ಕಾರದಲ್ಲಿ 12 ವಿಭಿನ್ನ ಬಂಗಿಗಳಿದ್ದು ಪ್ರತಿಯೊಂದು  ಭಾಗಗಳಿಗೆ ವ್ಯಾಯಾಮವನ್ನು ನೀಡುತ್ತದೆ. ಬೆಳಗಿನ ಸಮಯದಲ್ಲಿ ಸೂರ್ಯನಮಸ್ಕಾರವನ್ನು ಮಾಡುವುದರಿಂದ ದೇಹದ ಬಿಗಿತವನ್ನು ಶಮನಗೊಳಿಸಿ ಲವಲವಿಕೆಯಿಂದ ಇಡೀ ದಿನವನ್ನು ಕಳೆಯಲು ಸಹಾಯ ಮಾಡುತ್ತದೆ. 


ಸೂರ್ಯ ನಮಸ್ಕಾರದ ಪ್ರಯೋಜನಗಳು 


- ಸೂರ್ಯೋದಯದ ಸಮಯದಲ್ಲಿ ಮಾಡುವುದರಿಂದ ದೇಹದ ಬಿಗಿತವನ್ನು ಸಡಿಲಗೊಳಿಸಿ  ಲವಲವಿಕೆಯಿಂದ ಇರುವಂತೆ     ಮಾಡುತ್ತದೆ. ಮಾನಸಿಕ ಒತ್ತಡವನ್ನು ಕಡಿಮೆಮಾಡಿ ಮನಸ್ಸನ್ನು ಉಲ್ಲಸಿತಗೊಳಿಸುತ್ತದೆ. ಇವೆಲ್ಲದರ ಜೊತೆಗೆ ದೈಹಿಕ     ಉತ್ತೇಜನಕಾರಿಯಾಗಿದೆ. 

- ಸೂರ್ಯನಮಸ್ಕಾರವನ್ನು ನಿಯಮಿತವಾಗಿ ಮಾಡುತ್ತಾಬಂದರೆ ಹೃದಯದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ರಕ್ತನಾಳಗಳ   ಕಾರ್ಯವನ್ನು ಉತ್ತಮಗೊಳಿಸಿಸುತ್ತದೆ. ಇಡೀ ದೇಹದ ರಕ್ತ ಪರಿಚಲನೆಯನ್ನು ಉತ್ತಮಗೊಳಿಸಿ ಆರೋಗ್ಯವಾಗಿರುವಂತೆ   ನೋಡಿಕೊಳ್ಳುತ್ತದೆ. 


- ಇದು ಒಂದು ಉತ್ತಮ ದೈಹಿಕ ವ್ಯಾಯಾಮವಾಗಿದ್ದು , ದೇಹಕ್ಕೆ ಆರೋಗ್ಯ ಮತ್ತು ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ.   ನಿದ್ರೆಯ ತೊಂದರೆ ಇರುವವರು ನಿಯಮಿತವಾಗಿ ಅಭ್ಯಾಸ ಮಾಡುವುದರಿಂದ ಯಾವುದೇ ಚಿಂತೆ ಇಲ್ಲದೆ ಸುಖವಾಗಿ   ನಿದ್ರಿಸುವಂತೆ ಮಾಡುತ್ತದೆ. 
ಪರ್ವತಾಸನ
ಪರ್ವತಾಸನ 

- ಕಿಬ್ಬೊಟ್ಟೆಯ ಸ್ನಾಯುಗಳು, ಬೆನ್ನುಹುರಿಯ ನರಗಳು, ಕಾಲಿನ ಮಾಂಸಖಂಡಗಳು, ಉಸಿರಾಟದ ವ್ಯವಸ್ಥೆ ಮತ್ತು ಇತರ ಆಂತರಿಕ ಅಂಗಗಳನ್ನು ಪ್ರಚೋದಿಸುತ್ತದೆ.


- ಸೂರ್ಯನಮಸ್ಕಾರದಲ್ಲಿ ಕ್ರಮಬದ್ಧವಾಗಿ ಉಸಿರಾಟ ಕ್ರಿಯೆಯನ್ನು ಮಾಡುವುದರಿಂದ ಶ್ವಾಸಕೋಶದ ಎಲ್ಲ ತೊಂದರೆಗಳು ದೂರವಾಗುತ್ತವೆ. 


- ಮಾನವನ ದೇಹ, ಆತನ ಉಸಿರಾಟ ಮತ್ತು ಮನಸ್ಸಿನ ಏಕಾಗ್ರತೆಗಳ ನಡುವಿನ ಆಂತರಿಕ ಸಂಪರ್ಕವನ್ನು ಹೆಚ್ಚುಮಾಡುವ ಮೂಲಕ ಆತನನ್ನು ಮಾನಸಿಕವಾಗಿ ಶಕ್ತಿಯುತನನ್ನಾಗಿ ಮಾಡುತ್ತದೆ.


- ಇದು ಬೆನ್ನು ಮೂಳೆ, ಬೆನ್ನು, ಕುತ್ತಿಗೆ, ಭುಜ, ತೋಳು, ಕೈ, ಮಣಿಕಟ್ಟು ಮತ್ತು ಕಾಲಿನ ಸ್ನಾಯುಗಳಿಗೆ ಶಕ್ತಿಯನ್ನು ತುಂಬಿ ಒಟ್ಟಾರೆಯಾಗಿ ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ. 


- ಸೂರ್ಯನಮಸ್ಕಾರವನ್ನು ಪ್ರತಿದಿನವು ತಪ್ಪದೆ ಮಾಡುವುದರಿಂದ ತೂಕವನ್ನು ಸಹ ಕಡಿಮೆ ಮಾಡಿಕೊಳ್ಳಬಹುದು. ಹೊಟ್ಟೆ ಮತ್ತು ಸೊಂಟದ ಸುತ್ತ ಸೇರುವ ಕೊಬ್ಬನ್ನು ಕರಗಿಸಿ ದೇಹಕ್ಕೆ ಉತ್ತಮ ಆಕಾರವನ್ನು ನೀಡುತ್ತದೆ. 


- ಅಲ್ಲದೆ ಇದರ ಪರಿಣಾಮವಾಗಿ ತಲೆ ಕೂದಲಿನ ಬೆಳವಣಿಗೆ ಸಹ ಹೆಚ್ಚಾಗುತ್ತದೆ. ರಕ್ತದ ಸಂಚಾರವು ಎಲ್ಲ ನರಗಳಲ್ಲಿಯೂ ಉತ್ತಮವಾಗುವುದರಿಂದ ತಲೆ ಕೂದಲು ವೃದ್ಧಿಸುತ್ತದೆ. ಅಂತೆಯೇ ಚರ್ಮದ ಹೊಳಪು ಸಹ ಹೆಚ್ಚಾಗುತ್ತದೆ. 


- ಇದು ಥೈರಾಯಿಡ್, ಪ್ಯಾರಾಥೈರಾಯಿಡ್, ಪಿಟ್ಯುಟರಿ ಗ್ರಂಥಿಗಳಂತಹ ಅಂತಃಸ್ರಾವಕ ಗ್ರಂಥಿಗಳನ್ನು ಸಹ ಪ್ರಚೋದಿಸಿ ಸರಿಯಾಗಿ ಕೆಲಸ ಮಾಡುವಂತೆ ನೋಡಿಕೊಳ್ಳುತ್ತದೆ. 


ಭುಜಂಗಾಸನ
ಭುಜಂಗಾಸನ-  ಹೊಟ್ಟೆಗೆ ಸಂಬಂದಿಸಿದ  ಎಲ್ಲ ತೊಂದರೆಗಳಿಗೆ ಇದು ಒಂದು ಪರಿಣಾಮಕಾರಿ ಔಷಧ. ಹಾಗೂ ಹೊಟ್ಟೆಯ ಭಾಗದಲ್ಲಿ ಶೇಖರಣೆಯಾಗುವ ಬೊಜ್ಜನ್ನು ಸಹ ನಿವಾರಣೆ ಮಾಡುತ್ತದೆ.


-ಸೂರ್ಯನಮಸ್ಕಾರದಿಂದ ಮಕ್ಕಳಲ್ಲಿ ದೇಹಕ್ಕೆ ಬೇಕಾದ ವ್ಯಾಯಾಮ, ಲವಲವಿಕೆ, ಏಕಾಗ್ರತೆ ಮತ್ತು ಸಹಿಷ್ಣುತೆಯನ್ನು ಒದಗಿಸುತ್ತದೆ.ವಿಶೇಷವಾಗಿ ಪರೀಕ್ಷೆಯ ಸಮಯದಲ್ಲಿ ಅಭ್ಯಾಸವನ್ನು ಮಾಡುವುದರಿಂದ ದೇಹಕ್ಕೆ ಶಕ್ತಿ ಮತ್ತು ಜೀವಂತಿಕೆಯನ್ನು ಕೊಡುತ್ತದೆ. ಇದು ಆತಂಕ ಮತ್ತು ಚಡಪಡಿಕೆಯ ಭಾವನೆಯನ್ನು ಕಡಿಮೆ ಮಾಡುತ್ತದೆ. 


-ಇದು ಮಹಿಳೆಯರಿಗೆ ಆಕಾರದಲ್ಲಿ ಉಳಿಯಲು ಸುಲಭ ಮತ್ತು ನೈಸರ್ಗಿಕ ವಿಧಾನವಾಗಿದೆ. ಥೈರಾಯಿಡ್  ಗ್ರಂಥಿಯನ್ನು ಉತ್ತೇಜಿಸುವ ಮೂಲಕ ಹಾರ್ಮೋನಿನ ಸರ್ವಿಕೆಯನ್ನು ಹೆಚ್ಚಿಸಲು ಪ್ರೇರೇಪಿಸುತ್ತದೆ. ಸೂರ್ಯ ನಮಸ್ಕಾರದ ನಿಯಮಿತ ಅಭ್ಯಾಸ ಅನಿಯಮಿತ ಮುಟ್ಟಿನ ಚಕ್ರವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಮಗುವಿನ ಜನ್ಮದ ಸಮಯದಲ್ಲಿ ಸಹಾಯ ಮಾಡುತ್ತದೆ. 


ಇದನ್ನು ಒಂದು ಪರಿಪೂರ್ಣ ಆಸನ ಎಂದು ಪರಿಗಣಿಸಲಾಗಿದ್ದು, ಇದು ನಿಮ್ಮ ದೇಹ, ಉಸಿರಾಟ ಮತ್ತು ಮನಸ್ಸನ್ನು ಒಟ್ಟಿಗೆ ತರುವ 12 ಒಂದು ಗುಂಪಾಗಿದೆ. ಇಂದಿನ ಯುವಜನತೆ ಇದರಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸಿ ಸರಿಯಾದ ಕ್ರಮದಲ್ಲಿ ನಿಯಮಿತವಾಗಿ ಅಭ್ಯಾಸ ಮಾಡಿದರೆ ಈ ಮೇಲಿನ ಎಲ್ಲ ಉಪಯೋಗಗಳನ್ನು ಪಡೆದು ಆರೋಗ್ಯವಂತರಾಗಿ ಜೀವನ ಸಡೆಸಬಹುದು. 

loading...

2 comments:

  1. ಈ ಲೇಖನ ನಿಮಗೆ ಹೇಗೆ ಅನ್ನಿಸಿತು... ಕಮೆಂಟ ಮಾಡಿ...

    ReplyDelete
  2. ನಿಮ್ಮ ಅನಿಸಿಕೆ, ಅಭಿಪ್ರಾಯ ತಿಳಿಸಿ...

    ReplyDelete