ಜಿಯೋ ಆಪರಿಗೆ ಸೆಡ್ಡು ಹೊಡೆದ BSNL ಮಿನಿ ಡೇಟಾ ಪ್ಲಾನ್ - News Desk

Sunday, February 25, 2018

ಜಿಯೋ ಆಪರಿಗೆ ಸೆಡ್ಡು ಹೊಡೆದ BSNL ಮಿನಿ ಡೇಟಾ ಪ್ಲಾನ್

BSNL Logo image


        ಈ ಮೂಲಕ ಸರಕಾರಿ ಸ್ವಾಮ್ಯದ BSNL ತನ್ನೆಡೆಗೆ ಸೆಳೆಯಲು ಮತ್ತು ತನ್ನ ಖಾಯಂ ಗ್ರಾಹಕರಿಗೆ ಹೆಚ್ಚಿನ ಲಾಭ ನೀಡಲು ಹೊರಟಿದೆ. ಈ ಆಪರ್  ಜಿಯೋಗೆ ಸೆಡ್ಡು ಹೊಡೆಯುವಂತಿದ್ದು, ತನ್ನ ಎರಡು ಪ್ಲಾನನ್ನು ಘೋಷಿಸಿದೆ. ಇದುವರೆಗೆ ಜಿಯೋ ಸಹ ಇಷ್ಟು ಕಡಿಮೆ ಬೆಲೆಗೆ ಡೇಟಾವನ್ನು ನೀಡುತ್ತಿಲ್ಲ.




  •  ರೂ 7 ಡೇಟಾ ಪ್ಲಾನ್ :-  

              ಈ ಪ್ಲಾನಿನಲ್ಲಿ ಗ್ರಾಹಕರು 7 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡರೆ  ಒಂದು ದಿನದ ವ್ಯಾಲಿಡಿಟಿಯೊಂದಿಗೆ 1GB  3G ವೇಗದ ಡೇಟಾ ಬಳಕೆಯ ಅವಕಾಶವನ್ನು ಮಾಡಿಕೊಡಲಿದೆ. ಇದರಲ್ಲಿ ಯಾವುದೇ ರೀತಿಯ ವಾಯ್ಸ್ ಕರೆಯ ಸೌಲಭ್ಯ ದೊರೆಯದಿದ್ದರೂ  ಇದ್ದು ಒಂದು ಉತ್ತಮ ಡೇಟಾ  ಪ್ಲಾನ್ ಆಗಿದೆ. 


  • ರೂ 16 ಡೇಟಾ ಪ್ಲಾನ್ :- 

              ಇದು ಸಹ ಡೇಟಾ ಪ್ಲಾನ್ ಆಗಿದ್ದು, 16 ರೂಪಾಯಿಯ ರಿಚಾರ್ಜ್ನೊಂದಿಗೆ ದೊರೆಯುತ್ತದೆ. ಆದರೆ ಇಲ್ಲಿ 2 GB  3G ವೇಗದ ಡೇಟಾ ಬಳಕೆಯ ಅವಕಾಶ ನೀಡಲಾಗಿದೆ. ಒಂದು ದಿನದ ವ್ಯಾಲಿಡಿಟಿಯೊಂದಿಗೆ ಡೇಟಾ ಬಳಕೆಯ ಅವಕಾಶವನ್ನು  ನೀಡಲಿದೆ. ಇಲ್ಲಿ ಯಾವುದೇ ರೀತಿಯ ವಾಯ್ಸ್ ಕರೆಯ ಸೌಲಭ್ಯ ದೊರೆಯುವುದಿಲ್ಲ. 

BSNL v/s Jio logo image



              ಈ ಎರಡು ಪ್ಲಾನ್ಗಳು ಜಿಯೋಗೆ ಸೆಡ್ಡು ಹೋಯುವಂತಿದ್ದು, ಈ ಮೂಲಕ BSNL ಜನಮನ್ನಣೆಯನ್ನು ಗಳಿಸುತ್ತಿದೆ. ಜಿಯೋ ನ 11ರುಪಾಯಿಯ ಪ್ಲಾನಿನಲ್ಲಿ  ಕೇವಲ 400 MB ಡೇಟಾ ದೊರೆಯಲಿದೆ. ಆದರೆ ರೂಪಾಯಿ 7 ಮತ್ತು 16 ರ ಪ್ಲಾನ್ ಮೂಲಕ ಗ್ರಾಹಕರಿಗೆ ಹೆಚ್ಚಿನ ಡೇಟಾ ನೀಡಿ ತಾನು ಡಬ್ಬಲ್ ಲಾಭ ಮಾಡಿಕೊಳ್ಳಲು BSNL ಹೊರಟಿದೆ. 

No comments:

Post a Comment