ಆಧಾರ್ ಜೋಡಣೆಗೆ ಅವಧಿ ವಿಸ್ತರಣೆ.... - News Desk

Wednesday, November 29, 2017

ಆಧಾರ್ ಜೋಡಣೆಗೆ ಅವಧಿ ವಿಸ್ತರಣೆ....


ಕೇಂದ್ರ ಸರಕಾರ ಮತ್ತೊಮ್ಮೆ ಆಧಾರ್ ಜೋಡಣೆಯ ಅವಧಿಯನ್ನು ವಿಸ್ತರಿಸಿದೆ. ಬ್ಯಾಂಕ ಖಾತೆ , ಮೊಬೈಲ್ ಸಂಖ್ಯೆ ಮತ್ತು ಹಲವು ಯೋಜನೆ /ಸೇವೆಗಳೊಂದಿಗೆ ಆಧಾರ್ ಜೋಡಣೆ ಮಾಡಲು ಸರಕಾರ 2018 ಮಾರ್ಚ್ 31 ರ ವರೆಗೆ ಅವಕಾಶ ಕಲ್ಪಿಸಿದೆ.
135 ಕ್ಕಿಂತ ಹೆಚ್ಚಿನ ಯೋಜನೆಗಳಿಗೆ (35 ಸಚಿವಾಲಯಗಳು )ಆಧಾರ್ ಜೋಡಣೆ ಕಡ್ಡಾಯವಾಗಿದ್ದು, ಇದರಲ್ಲಿ ಪ್ರಧಾನಮಂತ್ರಿ ಪೆಸಲ್ ಭೀಮ ಯೋಜನೆ,ಎಲ್ಪಿಜಿ (LPG )ಸೀಮೆಎಣ್ಣೆ, ಪಡಿತರ, ರಸಗೊಬ್ಬರ ಸಬ್ಸಿಡಿ  ಮತ್ತು ನರೇಗಾ ಯೋಜನೆಗಳು ಸೇರಿವೆ.
ಇಂತಹ ಅವಕಾಶವನ್ನೇ ಉಪಯೋಗಿಸಿಕೊಂಡು ವಂಚಕರು ಜನ ಸಾಮಾನ್ಯರನ್ನು ಮೋಸಮಾಡುತ್ತಿದ್ದು, ಆಧಾರ್ ಸಂಖ್ಯೆಯನ್ನು ಯಾವುದೊ ಯೋಜನೆಗೆ ಜೋಡಣೆ ಮಾಡುತ್ತೇವೆಂದು ಕೇಳುವವರಿಗೆ ನೀಡಿ ಮೋಸಹೋಗಬೇಡಿ.. ಸರಕಾರಿ ಅಧಿಕೃತ ವೆಬ್ ಸೈಟ್ ಗಳಿಗೆ ಮಾತ್ರ ಆಧಾರ್ ಸಂಖ್ಯೆಯನ್ನು ನೀಡಬಹುದಾಗಿದ್ದು , ಎಲ್ಲೆಡೆಯೂ ಮೋಸಮಾಡುವವರ ಜಾಲ ಹರಡಿಕೊಂಡಿದೆ. ಇದರ ಬಗ್ಗೆ ಹೆಚ್ಚಿನ ಜಾಗರೂಕತೆಯನ್ನು ವಹಿಸಿ, ಸರಕಾರದ  ಈ ಪ್ರಯತ್ನವನ್ನು ಯಶಸ್ವಿಗೊಳಿಸಬೇಕಾಗಿದೆ.
ಪಾನ್ ಕಾರ್ಡನೊಂದಿಗೆ ಆಧಾರ್ ಲಿಂಕ್ ಮಾಡಬೇಕೇ ?  
No comments:

Post a Comment